ಹಿಂಡು ಹಿಂಡಾಗಿ ಕೃಷಿ ಭೂಮಿಗೆ ನುಗ್ಗಿದ ಕಾಡಾನೆಗಳು
Jul 30 2025, 12:45 AM ISTತಾಲೂಕಿನಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು ಆಹಾರ ಹುಡುಕಿಕೊಂಡು ರೈತರ ಕೃಷಿ ವಲಯಕ್ಕೆ ಕಾಡಾನೆಗಳು ಹಿಂಡು ಹಿಂಡಾಗಿ ದಾಂಧಲೆ ನಡೆಸುತ್ತಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ. ಇದೇ ಗ್ರಾಮದ ಪಟೇಲರ ಮನೆ ಬಸಪ್ಪ ಗೌಡ ಎಂಬುವರ ತೋಟವನ್ನು ನಾಶಪಡಿಸಿವೆ. ಇದೇ ರೀತಿ ತಾಲೂಕಿನ ಕೊಡಗು ಗಡಿ ಗ್ರಾಮ ತಂಬಲಗೇರಿಯಲ್ಲಿ ಐದಕ್ಕೂ ಹೆಚ್ಚು ಕಾಡಾನೆಗಳು ಗ್ರಾಮದ ಕೃಷ್ಣಮೂರ್ತಿ ಎಸ್ಟೇಟ್, ಟಿಡಿ ಸುಬ್ರಹ್ಮಣ, ಧರ್ಮರಾಜ್ರವರ ಕಾಫಿ ತೋಟಗಳಲ್ಲಿ ಕಾಫಿ, ಏಲಕ್ಕಿ, ಅಡಿಕೆ ಗಿಡಗಳನ್ನು ನಾಶಪಡಿಸಿವೆ. ಇದೇ ಗ್ರಾಮದ ವಿನೋದ್, ಮಧು ಎಂಬುವರ ಭತ್ತದ ಗz ಹಾಗೂ ತೋಟದ ಕೆರೆಯನ್ನು ಸಂಪೂರ್ಣ ನಾಶಪಡಿಸಿವೆ.