ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ರಾಜಶೇಖರ ಕೋಟಿ: ಗಣ್ಯರ ಸ್ಮರಣೆ
Jan 30 2024, 02:04 AM ISTನನಗೆ ಕೋಟಿಯವರು ವೈಯಕ್ತಿಕವಾಗಿ ಪರಿಚಯವಿರಲಿಲ್ಲ. ಒಮ್ಮೆ ಕ್ರೀಡಾ ಪಂದ್ಯಾವಳಿಯಲ್ಲಿ ಅವರಿಂದ ರನ್ನರ್ ಅಪ್ ಬಹುಮಾನ ಸ್ವೀಕರಿಸಿದ್ದೆ. ಆದರೆ, ಪತ್ರಿಕೆಯ ಮೂಲಕ ಅವರ ವ್ಯಕ್ತಿತ್ವ ನನಗೆ ಗೊತ್ತಿತ್ತು ಎನ್ನುತ್ತಾರೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ. ಇತ್ತ ಕೋಟಿಯವರು ಕೆ.ಜಿ.ಕೊಪ್ಪಲಿನಲ್ಲಿಯೇ ಮೊದಲು ಪತ್ರಿಕಾ ಕಚೇರಿ ಆರಂಭಿಸಿದ್ದರು. ನಾನು ಕೂಡ ಅದೇ ಊರಿನವನು. ಹೀಗಾಗಿ ಚಿಕ್ಕಂದಿನಿಂದಲೂ ಪರಿಚಿತರು. ಯಾವಾಗಲೂ ಕೂಡ ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಿದ್ದರು ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ.