ಹಿಂದೆ ಮಂತ್ರ, ತಂತ್ರ, ಈಗ ಕುತಂತ್ರ ಕೆಲಸ ಮಾಡ್ತಿದೆ!
Mar 29 2024, 12:46 AM ISTಚನ್ನಪಟ್ಟಣ: ಹಿಂದೆ ಮಂತ್ರ ಕೆಲಸ ಮಾಡ್ತಿತ್ತು. ನಂತರ ಯಂತ್ರ ಕೆಲಸ ಮಾಡ್ತಿತ್ತು. ಆದರೆ, ಈಗ ಕುತಂತ್ರ ಕೆಲಸ ಮಾಡ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಹೆಸರಿನ ಅಭ್ಯರ್ಥಿಯನ್ನು ಸ್ವತಂತ್ರವಾಗಿ ನಿಲ್ಲಿಸಲು ತಯಾರಿ ನಡೆಸಿದ್ದು, ಅವರು ಸೋಲನ್ನು ಈಗಾಗಲೇ ಒಪ್ಪಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಡಿ.ಕೆ. ಸಹೋದರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.