ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ
Dec 15 2024, 02:02 AM ISTಮನೆಗೆ ನುಗ್ಗಿ 15 ಲಕ್ಷ ರು.ನಗದು ಹಾಗೂ ಸುಮಾರು 7 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣ ಎದುರು ಕೆ.ಎಚ್.ಬಿ. ಬಡಾವಣೆಯಲ್ಲಿ ಸಂಭವಿಸಿದೆ. ಕಳ್ಳರು ಮನೆ ಪ್ರವೇಶ ಮಾಡಲು ಕಬ್ಬಿಣದ ಆಯುಧದಿಂದ ಮುಂಬಾಗಿಲು ಮೀಟಿ ಕಳ್ಳತನ ಮಾಡಿರುವುದು ಕೇವಲ ನಾಲ್ಕೈದು ಗಂಟೆಗಳಲ್ಲಿ ಮಾತ್ರ ಈ ಘಟನೆ ನಡೆದಿದ್ದು, ನಗದು, ಚಿನ್ನಾಭರಣ ಸೇರಿ ಒಟ್ಟು ಮೌಲ್ಯ 22 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಚೋರ ಎಲ್ಲವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬೈಕ್ನಲ್ಲಿ ಪರಾರಿಯಾಗುವ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.