ಡಿ.ಕೆ. ಶಿವಕುಮಾರ ಹೆಸರಿನಲ್ಲಿ ಕವಿವಿಯಲ್ಲಿ ಚಿನ್ನದ ಪದಕ ಸ್ಥಾಪನೆ
Oct 30 2023, 12:31 AM ISTಕನ್ನಡಪ್ರಭ ವಾರ್ತೆ ಧಾರವಾಡಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೆಸರಲ್ಲಿ ಬಂಗಾರದ ಪದಕ ನೀಡಲಾಗುವುದು ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಹೇಳಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾರಂಗ ಪ್ರಜ್ಞಾಪ್ರಭುತ್ವದ ಯಶಸ್ಸಿನ ಕೈಗನ್ನಡಿ. ಈ ಪತ್ರಿಕಾರಂಗದ ಬಗ್ಗೆ ಡಿ.ಕೆ. ಶಿವಕುಮಾರ ಅವರಿಗೆ ಗೌರವ ಭಾವನೆ ಇದೆ. ಪತ್ರಿಕಾರಂಗದ ಮೇಲಿನ ಅಭಿಮಾನ ಹಾಗೂ ಗೌರವದಿಂದಾಗಿ ಕವಿವಿಯಲ್ಲಿ ಗೋಲ್ಡ್ ಮೆಡಲ್ ಸ್ಥಾಪಿಸಿದ್ದು, ಪತ್ರಿಕೋದ್ಯಮ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಪದಕ ಪ್ರದಾನ ಮಾಡಲಾಗುವುದು ಎಂದು ಹೇಳಿದರು.