ಆ ಧ್ವನಿ ನನ್ನದಲ್ಲ, ಎಫ್‌ಎಸ್‌ಎಲ್ ತನಿಖೆ ನಡೆಸಿ
Sep 04 2025, 01:00 AM IST ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯ ನೀಡಲು ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜ. ಆದರೆ, ಅಲ್ಲಿ ಮಾತನಾಡಿದ್ದು ನಾನಲ್ಲ. ಆ ವಿಡಿಯೋದಲ್ಲಿನ ಸಂಭಾಷಣೆಯನ್ನು ಎಐ ಮೂಲಕ ಅದನ್ನು ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಕೂಡಲೇ ಈ ಆಡಿಯೋವನ್ನು ಎಫ್‌ಎಸ್‌ಎಲ್ ತನಿಖೆಗೆ ಒಳಪಡಿಸಬೇಕು ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.