ದಾಖಲೆ ಬರೆದ ಉಚ್ಚಿಲ ದಸರಾ ಸಂಪನ್ನ
Oct 25 2023, 01:15 AM ISTಕರ್ನಾಟಕದ ಕೋಲ್ಹಾಪುರ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಹೊಸ ದಾಖಲೆಯೊಂದಿಗೆ ಸಂಪನ್ನವಾಯಿತು. 2ನೇ ವರ್ಷದ ಈ ಉಚ್ಚಿಲ ದಸರಾದಲ್ಲಿ ಮಂಗಳವಾರ ನಡೆದ ವಿಜಯದಶಮಿ ಮತ್ತು ಶಾರದಾ ದೇವಿ ವಿಗ್ರಹದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.