ಕಬ್ಬು, ತೊಗರಿ ಬೆಳೆಗಾರರ ನಡುವೆ ಗಂಡೋರಿ ನೀರು ತಿಕ್ಕಾಟ
Nov 23 2024, 12:34 AM ISTತಾಲೂಕಿನ ರೈತರಿಗೆ ಗಂಡೋರಿನಾಲ ಜಲವೇ ಜೀವಾಳ. ಆದರೀಗ ಕಬ್ಬು ಬೆಳೆಯುವ ರೈತರು ಕಾಲುವೆಗಳಿಗೆ ನೀರು ಹರಿಸಬೇಡಿ, ಕಟಾವಿಗೆ ತೊಂದರೆಯಾಗುತ್ತದೆ, ಆದ್ದರಿಂದ ಕೆಲವು ದಿನ ನೀರು ಬಂದು ಮಾಡಿ ಎಂದು ಬೇಡಿಕೆ ಇಟ್ಟಿದ್ದರೆ, ಹಿಂಗಾರು ಬೆಳೆ ಬೆಳೆಯುವ ರೈತರು ತೊಗರಿ ಬೇಳೆ, ಜೋಳಕ್ಕೆ ನೀರು ಅವಶ್ಯಕತೆ ಇದ್ದು ಕಾಲುವೆಗಳಿಗೆ ಹರಿಸಬೇಕೆಂದು ಆಗ್ರಹಿಸಿರುವುದರಿಂದ ಇಬ್ಬರ ನಡುವೆ ತಿಕ್ಕಾಟ ಶುರುವಾಗಿದೆ.