ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
Jan 14 2024, 01:33 AM ISTಕೆರೂರ: ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿದ್ದ ₹ 40 ಸಾವಿರ ಮೌಲ್ಯದ ಕೇಬಲ್ ಕಳ್ಳತನ ಪ್ರಕರಣ ಭೇದಿಸಿರುವ ಕೆರೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೋನಿಯಾ ಉರ್ಫ ಸೋಹನ ಕಿಶೋರ ಮಚಲಿ. ಸಾಗರ ಶೇರಸಿಂಗ್ ಮಚಲಿ ಅವರನ್ನು ಬಂಧಿಸಿದ್ದು, ರಾಹುಲ್ ಕಿಶೋರ ಮಚಲಿ, ಮಹೇಶ ಉರ್ಫ ಚಿನ್ನು ಕಿಶೋರ ಮಚಲಿ ಪರಾರಿಯಾಗಿದ್ದು, ಶೋಧ ನಡೆಸಿದ್ದಾರೆ. ಅಗಸನಕೊಪ್ಪ ಗ್ರಾಮದ ಹೊಲದಲ್ಲಿರುವ ಮನೆಯಲ್ಲಿನ ₹ 40 ಸಾವಿರ ಬೆಲೆಬಾಳುವ 500 ಫೂಟ ಉದ್ದದ ಕೇಬಲ್ ಕಳ್ಳತನ ಮಾಡಿದ್ದರು.