ಒಂದೆಡೆ ಖಲಿಸ್ತಾನಿ ಉಗ್ರರನ್ನು ಪ್ರಧಾನಿ ಜಸ್ಟಿನ್ ಟ್ರುಡೋ ಬೆಂಬಲಿಸುತ್ತಿದ್ದರೆ, ಮತ್ತೊಂದೆಡೆ ಕೆನಡಾದ ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ಇತ್ತೀಚೆಗೆ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ವಿದೇಶಿ ಉಗ್ರ ಎಂದು ಬಣ್ಣಿಸಿದ್ದಾರೆ
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ತಮ್ಮ ಆರೋಪದ ಕುರಿತು ಭಾರತಕ್ಕೆ ತಾವು ಯಾವುದೇ ಸಾಕ್ಷ್ಯ ಕೊಟ್ಟಿಲ್ಲಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಟ್ರುಡೋರನ್ನು ತೀವ್ರ ತರಾಟೆ ತೆಗೆದುಕೊಂಡಿದೆ.