ಸಾಲ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಬಂಧನ
Dec 25 2024, 12:47 AM IST ಸಂತ್ರಸ್ತ ಮಹಿಳೆಯ ದೂರದ ಸಂಬಂಧಿಯ ಮೂಲಕ ಆರೋಪಿ ಸೂರನಹಳ್ಳಿ ಚೆಲುವರಾಮು ಹಾಗೂ ಬೊಮ್ಮನಹಳ್ಳಿ ಪುಟ್ಟಮ್ಮನವರ ಮಗ ರವಿ ಎಂಬುವರು ಪರಿಚಯವಾಗಿ ನಾವು ಬಿಜೆಪಿ ಮುಖಂಡರು, ನಮಗೆ ಎಲ್ಲ ರಾಜಕಾರಣಿಗಳ ಸಂಪರ್ಕ ಇದೆ ಎಂದು ನನ್ನನ್ನು ನಂಬಿಸಿ, ದಾಖಲೆಗಳನ್ನು ಕೇಳುವ ನೆಪದಲ್ಲಿ ಮನೆಗೆ ಬಂದು ಹೋಗುತ್ತಿದ್ದರು. ಸಾತನೂರು, ಕನಕಪುರ, ರಾಮನಗರ ಕಚೇರಿಗಳಲ್ಲಿ ದಾಖಲಾತಿ ಪಡೆದುಕೊಳ್ಳಬೇಕು ಎಂದು ಕರೆಸಿಕೊಂಡು ಸಾಲ ಕೊಡಿಸುವುದಾಗಿ ಅಲೆದಾಡಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.