ಪ್ರಜ್ವಲ್ ರೇವಣ್ಣ ಬಿಜೆಪಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಅಲ್ಲ

Dec 03 2023, 01:00 AM IST
ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್‌ ಅಭ್ಯರ್ಥಿ ಎಂದು ದೇವೇಗೌಡರೇನೋ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೆ. ಹಾಗಾಗಿ ಪ್ರಜ್ವಲ್‌ ರೇವಣ್ಣ ಅವರು ಬಿಜೆಪಿ ಮೈತ್ರಿಕೂಟದ ಒಮ್ಮತದ ಅಧಿಕೃತ ಅಭ್ಯರ್ಥಿ ಅಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷವಾಗಿ ಇರುವಾಗ ಏಕಪಕ್ಷೀಯ ತೀರ್ಮಾನ ಮಾಡಿರುವ ನಿರ್ಧಾರ ಸಮರ್ಪಕವಾಗಿಲ್ಲ. ಪ್ರಜ್ವಲ್ ರೇವಣ್ಣ ಎನ್.ಡಿ.ಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಅಲ್ಲ. ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರೂ ಕೂಡ ಜೊತೆಯಲ್ಲಿ ಇದು, ಜಂಟಿ ಹೇಳಿಕೆ ನೀಡಿದರೆ ಮಾತ್ರ ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗುತ್ತಾರೆ. ದೇವೇಗೌಡರ ಹೇಳಿಕೆ ಖಂಡನೀಯ ಎಂದಿದ್ದಾರೆ.

ಬಿಜೆಪಿ-ಬಿಆರ್‌ಎಸ್ ಭಯ<bha>;</bha> ತೆಲಂಗಾಣಕ್ಕೆ ಕಾಂಗ್ರೆಸ್ ಶಾಸಕರು

Dec 03 2023, 01:00 AM IST
ಕನ್ನಡಪ್ರಭ ವಾರ್ತೆ ಬಳ್ಳಾರಿತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ಭಯವಿದ್ದು, ಶನಿವಾರ ಸಂಜೆಯೊಳಗೆ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರು ತೆಲಂಗಾಣಕ್ಕೆ ತೆರಳಲು ಎಐಸಿಸಿ ಸೂಚನೆ ನೀಡಿದೆ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಹೇಳಿದರು.ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವುದು ಖಚಿತ. ಆದರೆ, ಬಿಜೆಪಿಯವರು ದೇಶದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಆರ್ ಎಸ್ ಹಾಗೂ ಬಿಜೆಪಿಯವರು ಸೇರಿ ಏನಾದರೂ ಮಾಡುತ್ತಾರೆ (ಆಪರೇಷನ್ ಕಮಲ) ಎಂಬ ಭಯವಿದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆಯೂ ಇದೆ. ಹೀಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ತೆಲಂಗಾಣಕ್ಕೆ ತೆರಳುತ್ತಿದ್ದೇವೆ ಎಂದರು.