ಮುಂಗಾರು ಪೂರ್ವ ಮಳೆ: ಹೊಲಗಳತ್ತ ರೈತರ ಚಿತ್ತ
May 27 2024, 01:05 AM ISTಜಿಲ್ಲೆಯಲ್ಲಿ ಒಂದು ವಾರದಿಂದ ಅಲ್ಲಲ್ಲಿ ಜೋರಾಗಿಯೇ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣ ಸುಡು ಬಿಸಿಲಿನಿಂದಾಗಿ ಬಯಲು ಸೀಮೆಯಂತಾಗಿದ್ದ ಮಲೆನಾಡಿನ ಚಿತ್ರವನ್ನೇ ಬದಲಾಯಿಸಿದೆ. ಇನ್ನೂ ಜಿಲ್ಲೆಯಲ್ಲಿ ಮುಂಗಾರಿಗೂ ಮೊದಲೇ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ರೈತರು ಹೊಲ-ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಕಾದಿರುವ ಭೂಮಿಗೆ ಮಳೆ ಬೀಳುತ್ತಿದ್ದಂತೆ ಭೂಮಿ ಹದಗೊಳಿಸಿ, ಬಿತ್ತನೆಗೆ ಹಣಿ ಮಾಡುತ್ತಿದ್ದಾರೆ.