ಕಾಂಗ್ರೆಸ್, ನೆಹರು ವಿರುದ್ಧ ಮೋದಿ ತೀಕ್ಷ್ಣ ವಾಗ್ದಾಳಿ
Jul 30 2025, 01:27 AM ISTಆಪರೇಷನ್ ಸಿಂದೂರ ವಿಚಾರದಲ್ಲಿ ತಮ್ಮನ್ನು ಟೀಕಿಸಿದ್ದ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಸ್ವಾವಲಂಬಿಯಾಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನವನ್ನು ಅವಲಂಬಿಸಿದೆ. ತನಗೆ ಬೇಕಾದ ಟೀಕೆಯ ಸರಕುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದುರದೃಷ್ಟವಶಾತ್ ಪಾಕಿಸ್ತಾನಿ ಪ್ರಚಾರದ ವಕ್ತಾರರಾಗಿವೆ’ ಎಂದು ಕಿಡಿಕಾರಿದ್ದಾರೆ.