ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಅಮೂಲ್ಯ ಹರಳುಗಳಿಂದ ಮಾಡಿದ, ಬೆಳ್ಳಿಯ ಕಡ್ಡಿಗಳನ್ನು ಹೊಂದಿರುವ ರಾಮೆನ್ ಬಟ್ಟಲುಗಳನ್ನು ಹಾಗೂ ಅವರ ಪತ್ನಿಗೆ ವಿಶೇಷ ಪೇಪಿಯರ್ ಮ್ಯಾಚೆ ಪೆಟ್ಟಿಗೆಯಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.
‘ಜಾಗತಿಕ ಆರ್ಥಿಕತೆಯ ಸ್ಥಿರತೆ ಕಾಪಾಡಲು ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವುದು ಅವಶ್ಯಕ. ಇದಕ್ಕಾಗಿ ಪರಸ್ಪರ ಗೌರವ, ಆಸಕ್ತಿ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ದೀರ್ಘಕಾಲಿನ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಭಾರತ ಸಿದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ನಮ್ಮ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇದೆ. ಜತೆಗೆ ನೀತಿಗಳಲ್ಲಿ ಪಾರದರ್ಶಕತೆಯೂ ಇದ್ದು, ಹಸಿರು ಇಂಧನ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಕರ್ಷಕ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
: 2024ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ 293 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ, ಈಗ ಚುನಾವಣೆ ನಡೆದರೆ 324 ಸೀಟುಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ.
ರಷ್ಯಾದಿಂದ ತೈಲ ಖರೀದಿ ಮೂಲಕ ಉಕ್ರೇನ್ ಯುದ್ಧದ ಬೆಂಕಿಗೆ ಭಾರತ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸುತ್ತಿದ್ದ ಅಮೆರಿಕ, ಇದೀಗ ಉಕ್ರೇನ್ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.50ರಷ್ಟು ತೆರಿಗೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ದೇಶೀಯ ರಫ್ತುದಾರರಿಗೆ ನೆರವು ನೀಡಲು ವಿವಿಧ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಟ್ರಂಪ್ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಸಂಪರ್ಕಿಸುವ ಪ್ರಯತ್ನವನ್ನೂ ನಡೆಸಿದ್ದರು. ಕಳೆದ ಕೆಲ ವಾರಗಳಿಂದ ಮೋದಿ ನಾಲ್ಕು ಬಾರಿ ಕರೆ ಮಾಡಿದ್ದರು. ಆದರೆ, ಪ್ರತಿ ಬಾರಿಯೂ ಟ್ರಂಪ್ ಅವರ ಕರೆ ಸ್ವೀಕರಿಸಲು ಮೋದಿ ನಿರಾಕರಿಸಿದರು ಎಂದು ಜರ್ಮನಿಯ ಪ್ರತಿಷ್ಠಿತ ಪತ್ರಿಕೆಯೊಂದು ವರದಿ