ಸಮ್ಮೇಳನಕ್ಕೆ ಬರುವವರಿಗೆ ಸೂಕ್ತ ವಸತಿ ವ್ಯವಸ್ಥೆ: ಶಾಸಕ ಪಿ.ರವಿಕುಮಾರ್
Dec 06 2024, 09:00 AM ISTಅಂದಾಜು 10ರಿಂದ 15 ಸಾವಿರದಷ್ಟು ಗಣ್ಯರು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಪ್ರೇಮಿಗಳು ನುಡಿ ಹಬ್ಬಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಇವರ ವಾಸ್ತವಕ್ಕಾಗಿ ಹೋಟೆಲ್, ಲಾಡ್ಜ್ ಮತ್ತು ಕಲ್ಯಾಣ ಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಉತ್ತಮ ರೀತಿಯ ಶೌಚಾಲಯ ವ್ಯವಸ್ಥೆ ಜೊತೆಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮವಹಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.