ಬ್ಯಾಡಗಿಯ 4 ಕಡೆಗಳಲ್ಲಿ ರಸ್ತೆಗಳಿಗೆ ಬ್ರಿಡ್ಜ್ ನಿರ್ಮಾಣ: ಶಾಸಕ ಶಿವಣ್ಣನವರ
Dec 04 2024, 12:30 AM ISTಸೇತುವೆ (ಬ್ರಿಡ್ಜ್ ) ಇಲ್ಲದೇ ಮಳೆಯಿಂದಾದ ಅನಾಹುತಕ್ಕೆ ನೂರಾರು ಎಕರೆ ಕೃಷಿಭೂಮಿಯಲ್ಲಿನ ಬೆಳೆನಾಶವಾಗಿದ್ದು ಸಂತ್ರಸ್ತ ರೈತರ ನೆರವಿಗೆ ಸ್ಪಂದಿಸಿದ್ದು ಮಾಸಣಗಿ, ಶಂಕರೀಪುರ, ಹಿರೇಹಳ್ಳಿ ಸೇರಿದಂತೆ ತಾಲೂಕಿನ 4 ಕಡೆಗಳಲ್ಲಿ ರಸ್ತೆಗಳಿಗೆ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಬರುವ ಆರ್ಥಿಕ ವರ್ಷದಲ್ಲಿ ಇದಕ್ಕೆ ಅನುಮೋದನೆ ಸಿಗಲಿದ್ದು ಕಾಮಗಾರಿ ಆರಂಭಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಳಿಸಿದರು.