ಶಾಸಕ ಅಥವಾ ಸಂಸದನಾಗಬೇಕೆಂದು ನಾನೆಂದೂ ಹಪಹಪಿಸಿಲ್ಲ
Dec 01 2024, 01:31 AM ISTನಾನು ಸಂಸದ, ಶಾಸಕನಾಗಲು ಎಂದು ಕೂಡ ಹಪಹಪಿಸಿಲ್ಲ. ಹಾಗಿದ್ದರೆ ನಾನು ಚಿತ್ರರಂಗಕ್ಕೆ ಹೋಗುತ್ತಿರಲಿಲ್ಲ, ರಾಜಕಾರಣಕ್ಕೆ ಬರುತ್ತಿದ್ದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ಧವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ ಇಲ್ಲಿಯವರೆಗೂ ನಾನು ನಮ್ಮ ಪಕ್ಷ ಸಂಕಷ್ಟದಲ್ಲಿತ್ತು, ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.