ತಾಲೂಕಿನ ಎಲ್ಲಾ ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಶಾಸಕ ಜಿ.ಎಚ್.ಶ್ರೀನಿವಾಸ್
Mar 02 2025, 01:17 AM ISTತರೀಕೆರೆ, ತಾಲೂಕಿನ 10500 ಮನೆಗಳಿಗೆ ಇ-ಖಾತಾಗಳಿಲ್ಲ. ತಾಲೂಕಿನ ಎಲ್ಲಾ ತಾಂಡಗಳನ್ನು ಕಂದಾಯ ಮತ್ತು ಉಪಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲರಿಗೂ ೯೪(ಸಿ) ಇ-ಖಾತಾ ಮಾಡಿಕೊಡಲು ತಾವು ಬದ್ಧರಾಗಿದ್ದು, ಈಗಾಗಲೇ ಲಿಂಗದಹಳ್ಳಿ ಹೋಬಳಿ ದೊಡ್ಡ ಲಿಂಗದಹಳ್ಳಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.