ಟೆಂಡರ್‌ ವಿಚಾರದಲ್ಲಿ ಶಾಸಕ ರೇವಣ್ಣ ತಾಪಂ ಇಒ ವಾಗ್ವಾದ

Mar 07 2025, 11:46 PM IST
ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾ.ಪಂ. ತಾಲೂಕು ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳ ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು. ತಾಲೂಕು ಪಂಚಾಯಿತಿಯಲ್ಲಿ ಕಂಪ್ಯೂಟರ್ ನಿರ್ವಹಣೆಗಾಗಿ ನಲವತ್ತು ಲಕ್ಷ ರು. ಗಳ ಟೆಂಡರ್ ಕರೆಯಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮಾಡಿರುವ ಅಧಿಕಾರಿಗಳು ನಲವತ್ತು ಲಕ್ಷದ ಟೆಂಡರ್‌ಗೆ ನಾಲ್ಕು ಕೋಟಿ ವ್ಯವಹಾರದ ವಹಿವಾಟು ತೋರಿಸಬೇಕೆಂದು ಟೆಂಡರ್‌ದಾರರಿಗೆ ತಾಕೀತು ಮಾಡಿ ಅವರ ಟೆಂಡರ್‌ ಅನ್ನು ಮೂಲೆಗುಂಪು ಮಾಡಿದ್ದಾರೆ ಎಂದು ತಾಪಂ ಅಧಿಕಾರಿಯನ್ನು ತೀವ್ರವಾಗಿ ತರಾಟೆ ತಗೆದುಕೊಂಡರು.