ಬಸವಾಪಟ್ಟಣದ ಗತವೈಭವ ಮರುಕಳಿಸಲು ಪ್ರಯತ್ನಿಸುವೆ ಶಾಸಕ ಮಂಜು

Aug 03 2025, 11:45 PM IST
ಸಂಸ್ಕಾರವಿದ್ದಾಗ ಮಾತ್ರ ವಿದ್ಯೆಗೆ ಬೆಲೆ ಮತ್ತು ಎಲ್ಲರೂ ಗುರುಹಿರಿಯರಲ್ಲಿ ಗೌರವ ಭಾವನೆ ಹೊಂದಿರುವಂತಹ ಬಸವಾಪಟ್ಟಣ ಗ್ರಾಮವು ಬಹಳ ಹಿಂದಿನಿಂದಲೂ ವಿದ್ಯಾಕೇಂದ್ರವಾಗಿದೆ. ವಾಣಿಜ್ಯ ಬೇಸಾಯದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿತ್ತು. ಹಿಂದಿನ ವೈಭವದ ಬಸವಾಪಟ್ಟಣ ಸ್ಥಾಪನೆಗೆ ಶ್ರಮಿಸುವುದಾಗಿ ಅರಕಲಗೂಡು ಶಾಸಕ ಎ.ಮಂಜು ತಿಳಿಸಿದರು. ಬಸವಾಪಟ್ಟಣ ಗ್ರಾಮದ ಶ್ರೀ ತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜರುಗಿದ ಮುನೇಶ್ವರ ಸ್ವಾಮಿ ಪೂಜಾ ಕೈಂಕರ್ಯ ರುದ್ರಾಭಿಷೇಕ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ೨೪-೨೫ನೇ ಸಾಲಿನಲ್ಲಿ ಶೇ. ೮೦ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದರು.

ಅಪರಾಧ ತಡೆಯುವ ನಿಟ್ಟಿನಲ್ಲಿ ಗಸ್ತು ಹೆಚ್ಚಿಸಿ ಶಾಸಕ ಬಾಲಕೃಷ್ಣ

Aug 01 2025, 11:45 PM IST
ವಾಹನ ಕಳ್ಳತನ, ಸರಗಳ್ಳತನ, ದರೋಡೆ ಮುಂತಾದ ಗಂಭೀರ ಅಪರಾಧಗಳ ತಡೆಯುವ ನಿಟ್ಟಿನಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ೩೬ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲಿ ೨೫ ಕ್ಯಾಮರಾಗಳು ಉತ್ತಮ ಸ್ಥಿತಿಯಲ್ಲಿವೆ. ಉಳಿದ ೧೬ ಕ್ಯಾಮರಾಗಳು ಸುಸ್ಥಿತಿಯಲ್ಲಿಲ್ಲ. ಪುರಸಭೆ ವತಿಯಿಂದ ಹೊಸದಾಗಿ ೧೬ ಕ್ಯಾಮರಾಗಳನ್ನು ಇಲಾಖೆಗೆ ನೀಡಲಾಗುವುದು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಹಿರೀಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ ಹೋಬಳಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಆಯಾ ಗ್ರಾಮ ಪಂಚಾಯಿತಿಗಳ ನೆರವು ಪಡೆಯಲಾಗುವುದು ಎಂದರು.