ವಿಷಕಾರಿ ತ್ಯಾಜ್ಯ ಸಂಸ್ಕರಿಸದೆ ಹೊರಬಿಟ್ಟರೆ ಕ್ರಮ: ಶಾಸಕ
Aug 05 2025, 11:45 PM ISTದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳು ಕಲುಷಿತ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸ್ಥಳೀಯ ಜಲಮೂಲಗಳಿಗೆ ನೇರವಾಗಿ ಬಿಡುತ್ತಿರುವುದು ಕಂಡು ಬಂದಿದೆ. ರಾಸಾಯನಿಕ ಘನತ್ಯಾಜ್ಯವನ್ನು ಕೆರೆ, ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿದ್ದು, ಇದರಿಂದ ಅಂತರ್ಜಲ, ಮಣ್ಣು, ಗಾಳಿ ಕಲುಷಿತಗೊಳ್ಳುತ್ತಿದೆ. ಅಕ್ರಮವಾಗಿ ತ್ಯಾಜ್ಯ ಸುರಿಯುವ ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.