ತಮಿಳ್ನಾಡಲ್ಲಿ ಮತ್ತೆ ಸರ್ಕಾರ, ರಾಜ್ಯಪಾಲ ಜಟಾಪಟಿ
Nov 17 2023, 06:45 PM ISTಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜ್ಯಪಾಲರು ಮತ್ತು ಡಿಎಂಕೆ ಸರ್ಕಾರದ ನಡುವೆ ಜಟಾಪಟಿ ಆರಂಭವಾಗಿದೆ. ಸರ್ಕಾರದ ಅಂಗೀಕರಿಸಿದ್ದ 10 ಮಸೂದೆಗಳಿಗೆ ಸಹಿ ಹಾಕದೇ ರಾಜ್ಯಪಾಲ ಆರ್.ಎನ್.ರವಿ ಅವರು ಮರಳಿಸಿದ್ದಾರೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರ್ಕಾರ, ಶನಿವಾರ ಮತ್ತೆ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿ ಮತ್ತೆ 10 ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲು ನಿರ್ಧರಿಸಿದೆ.