ಹಾಡು ನಿಲ್ಲಿಸಿದ ಪಾರಿಜಾತ ಕಲಾವಿದ ಹೊಳಬಸಯ್ಯ
May 03 2024, 01:13 AM ISTಕನ್ನಡಪ್ರಭ ವಾರ್ತೆ ಲೋಕಾಪುರಪಾರಿಜಾತ ಕಥಾ ಮೂಲಕ ಕರ್ನಾಟಕ ಮಾತ್ರವಲ್ಲ ಹೊರರಾಜ್ಯದಲ್ಲೂ ಮನೆಮಾತಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ದುಂಡಯ್ಯ ಸಂಬಾಳದ (90) ವಯೋಸಹಜ ಕಾಯಿಲೆಯಿಂದ ಗುರುವಾರ ಇಹಲೋಕ ತ್ಯಜಿಸಿದರು. ಮೃತರಿಗೆ ಪತ್ನಿ, 4 ಜನ ಗಂಡು ಮಕ್ಕಳು ಹಾಗೂ ಒರ್ವ ಪುತ್ರಿ ಇದ್ದಾರೆ.