ಸಾಹಿತ್ಯ ಸಮ್ಮೇಳನ ಗೋಷ್ಠಿಯಲ್ಲಿ ಕೇಳುಗರ ಹೃದಯ ಗೆದ್ದ ಕಥೆಗಾರರು
Feb 03 2024, 01:47 AM ISTಶಿವಮೊಗ್ಗ ನಗರದ ಸಾಹಿತ್ಯ ಗ್ರಾಮದಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಶುಕ್ರವಾರದ ಕಾರ್ಯಕ್ರಮದಲ್ಲಿ ಕಥೆಗಾರರು ತಮ್ಮ ಅನುಭವದ ಹೂರಣವನ್ನು ಕಥೆಗಳ ಮೂಲಕ ಕೇಳುಗರನ್ನು ತಲುಪಿದರು. ಕಲ್ಪನೆಯ ಸನ್ನಿವೇಶಗಳಲ್ಲಿ ಆಗಾಗ್ಗೆ ಬರುತ್ತಿದ್ದ ನವಿರಾದ ಹಾಸ್ಯ, ಗಂಭೀರತೆಗಳೊಂದಿಗೆ ಸಮ್ಮೇಳನದ ಗೋಷ್ಠಿಗೆ ಹೊಸತನದ ಚಿಂತನೆ ಮೂಡಿಸಿತು. ಖ್ಯಾತ ಲೇಖಕ ಕಲೀಂ ಉಲ್ಲಾ ತಾವು ರಚಿಸಿದ 'ಪ್ರೇಮ ಪತ್ರಗಳು' ಕಥೆ, ಶಿಕ್ಷಕಿ ನೇತ್ರಾವತಿ ರಚಿಸಿದ 'ಸೋಜಿಗ', ಅಧ್ಯಾಪಕ ಡಾ.ಲವ ರಚಿಸಿದ 'ದ್ವಾಪರ', ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ರಚಿಸಿದ 'ಅಡಿಕೆ ಕೊನೆ', ಸಾಗರದ ಪರಮೇಶ್ವರ ಕರೂರು ರಚಿಸಿದ 'ಅಪ್ಪನ ಕಾಗೆ', ಲೇಖಕ ಸೂರ್ಯಪ್ರಕಾಶ್ ರಚಿಸಿದ 'ಉತ್ಸವ' ಕಥೆಗಳು ಕೇಳುಗರ ಮನಸೂರೆಗೊಂಡಿತು.