ಹೈಕೋರ್ಟ್ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಸಿದ್ಧಪಡಿಸಿ ಯುವತಿ ಸೇರಿ ನಾಲ್ವರಿಗೆ ಕಳುಹಿಸಿ ₹1.53 ಕೋಟಿ ಹಣ ಪಡೆದು ವಂಚಿಸಿದ್ದ ಆರೋಪದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ನಡತೆ ಬಗ್ಗೆ ಸಾರ್ವಜನಿಕರ ಮುಂದೆ ಕೀಳಾಗಿ ಮಾತನಾಡಿದವನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದ ಪ್ರಕರಣದಲ್ಲಿ ಪತಿ ಜೀವನವಿಡೀ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿಯಿಂದ ಹೈಕೋರ್ಟ್ ಪಾರು ಮಾಡಿದೆ.
ಕಮಾಂಡ್ ಆಸ್ಪತ್ರೆಯ ವಿಸ್ತರಣೆಗೆ 530 ಮರ ಹಾಗೂ ಉಪನಗರ ರೈಲು ಯೋಜನೆಯಡಿ (ಬಿಎಸ್‌ಆರ್‌ಪಿ) ಅಂಬೇಡ್ಕರ್ ನಗರ ಮತ್ತು ಮುದ್ದೇನಹಳ್ಳಿ ಮಾರ್ಗದಲ್ಲಿ 1988 ಮರಗಳನ್ನು ತೆರವುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆ-ರೈಡ್) ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಕೋರ್ಟುಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಸದಾ ಮುಂದಿದೆ. ಕಲಬುರಗಿ ಹೈಕೋರ್ಟ್ ಪೀಠ ಫೈವ್‌ಸ್ಟಾರ್ ಹೋಟೆಲ್‌ನಂತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ। ಅಭಯ್ ಓಕಾ ಹೇಳಿದ್ದಾರೆ.