18 ವರ್ಷದೊಳಗಿನವರಿಗೆ ಮಾದಕ ವಸ್ತು ಮಾರಾಟ ಅಪರಾಧ: ನಿರಂಜನಗೌಡ
Jun 28 2024, 12:56 AM ISTನರಸಿಂಹರಾಜಪುರ 18 ವರ್ಷದ ಒಳಗಿನ ಮಕ್ಕಳಿಗೆ ಮಾದಕ ವಸ್ತು ಮಾರಾಟ ಮಾಡಿದರೆ ಅಪರಾಧವಾಗುತ್ತದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು. ಬುಧವಾರ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಧ.ಗ್ರಾ.ಯೋಜನೆಯ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಾಲಾ, ಕಾಲೇಜಿನ 100 ಮೀ. ಒಳಗೆ ಮಾದಕ ವಸ್ತು ಮಾರಾಟ ಮಾಡುವುದನ್ನು ನಿಷೇದಿಸಲಾಗಿದೆ ಎಂದರು.