ಬೇಲೂರು ಪುರಸಭೆ ಅಧ್ಯಕ್ಷರಾಗಿ ಅಶೋಕ್ ಉಪಾಧ್ಯಕ್ಷರಾಗಿ ಉಷಾ ಆಯ್ಕೆ
Aug 20 2024, 12:47 AM ISTಬೇಲೂರು ಪುರಸಭೆಗೆ ನೂತನ ಅಧ್ಯಕ್ಷರಾಗಿ ಎ.ಆರ್. ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ಉಷಾ ಸತೀಶ್ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪುರಸಭೆಯಲ್ಲಿ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ತಹಸೀಲ್ದಾರ್ ಮಮತಾ ಅವರು ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಶಾಂತಕುಮಾರ್ ಜೊತೆ ಸಿ.ಎನ್. ದಾನಿ , ಸಭಾ ಕೌಸರ್, ಮೀನಾಕ್ಷಿ ವೆಂಕಟೇಶ್, ಭರತ್ ಸೇರಿದಂತೆ ಕೆಲ ಸದಸ್ಯರು ಸಭಾಭವನದಿಂದ ಹೊರ ನಡೆದರು.