10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ನವೀಕರಣ ಕಡ್ಡಾಯ: ಡಿಸಿ ಡಾ. ವಿದ್ಯಾಕುಮಾರಿ
Dec 21 2024, 01:17 AM ISTಜಿಲ್ಲೆಯಲ್ಲಿ ಈವರೆಗೆ 14,16,407 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 35,750, 5 ರಿಂದ 18 ವರ್ಷದವರು 2,07,021, 18 ವರ್ಷ ಮೇಲ್ಪಟ್ಟ 11,73,636 ಜನರು ಆಧಾರ್ ಕಾರ್ಡ್ ಅನ್ನು ಪಡೆದಿದ್ದಾರೆ. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟವರು 38,680 ಜನರು, 15 ವರ್ಷ ಮೇಲ್ಪಟ್ಟ 38,188 ಜನ ಸೇರಿದಂತೆ ಒಟ್ಟು 76,868 ಜನರು ನವೀಕರಿಸಿಕೊಳ್ಳಬೇಕಿದೆ.