ವೀರಶೈವ ಪುರಾತನ ಆಧಾರ ಸಹಿತ ಐತಿಹಾಸಿಕ ನೈಜ ಧರ್ಮ: ಡಾ.ಪರಮೇಶ್ವರಿ ಹೊಸಮಠ
Mar 14 2025, 01:34 AM ISTವೀರಶೈವ ಧರ್ಮ ಅತಿ ಪುರಾತನವಾದದ್ದು ಎಂಬುದಕ್ಕೆ 98 ಶಿಲಾಶಾಸನಗಳಿವೆ. 168 ಚರಿತ್ರೆಗಳಲ್ಲಿ ವೀರಶೈವ ಧರ್ಮ ಕುರಿತ ಉಲ್ಲೇಖಗಳಿವೆ. ಜಗದ್ಗುರು ರೇಣುಕಾಚಾರ್ಯರು ಆದಿ ಶಂಕರ ಆಚಾರ್ಯರಿಗೆ ದಯಪಾಲಿಸಿದ ಚಂದ್ರ ಮೌಳಿ ಲಿಂಗವನ್ನು ಶೃಂಗೇರಿ ಶಾರದಾ ಪೀಠದಲ್ಲಿ ಇಂದಿಗೂ ನೋಡಬಹುದು. ವೀರಶೈವ ಧರ್ಮ ಅತ್ಯಂತ ಪುರಾತನ ಆಧಾರ ಸಹಿತ ಐತಿಹಾಸಿಕ ನೈಜ ಧರ್ಮವಾದಾಗಿದೆ ಎಂದು ಗುಳೇದಗುಡ್ಡದ ಸರಕಾರಿ ಪದವಿಪೂರ್ವ ಉಪನ್ಯಾಸಕಿ ಡಾ.ಪರಮೇಶ್ವರಿ ಹೊಸಮಠ ಹೇಳಿದರು.