ಮತಾಂತರದ ಆಧಾರ ರಹಿತ ಆರೋಪ ವಿರುದ್ಧ ಪ್ರತಿಭಟನೆ
Aug 01 2025, 12:30 AM ISTಡಾ. ಕಿಟೆಲ್ ಸೇರಿದಂತೆ ಕ್ರಿಶ್ಚಿಯನ್ ಮಿಶನರಿಗಳು ಭಾರತದಲ್ಲಿ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿವೆ. ಈಗಲೂ ಸಲ್ಲಿಸುತ್ತಿವೆ. ಯಾವುದೇ ಆಸೆ- ಆಕಾಂಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ಸನ್ಯಾಸಿಯರ ಮೇಲೆ ಆಧಾರ ರಹಿತವಾಗಿ ಆರೋಪ ಮಾಡಿ ಛತ್ತೀಸಗಢದಲ್ಲಿ ಸಿಸ್ಟರ್ಸ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಅವರನ್ನು ಬಂಧಿಸಲಾಗಿದೆ.