ಮಿರಿಯಾಣ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಆರೋಪ
Jul 15 2024, 01:47 AM ISTಮಿರಿಯಾಣ, ಕಿಷ್ಟಾಪೂರ, ಬೈರಂಪಳ್ಳಿ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಕಲ್ಲುಗಣಿಗಾರಿಕೆ ಧಂದೆ ನಡೆಯುತ್ತಿದೆ ಸರಕಾರಿ ಜಮೀನು ಲೀಜ್ ಪಡೆದುಕೊಂಡು ನಂತರ ಜಮೀನು ಭೂ ಕಬಳಿಕೆ ನಡೆಯುತ್ತಿದೆ. ತಾಲೂಕು ಕಂದಾಯ ಇಲಾಖೆ ಮಾಹಿತಿ ಪ್ರಕಾರ ಕೇವಲ೨೦ ಜನರಿಗೆ ಮಾತ್ರ ಲೀಜ್ ನೀಡಿ ಪರವಾನಿಗೆ ನೀಡಲಾಗಿದೆ. ಅದು ಕೇವಲ ೨ಎಕರೆ ಮಾತ್ರವಷ್ಟೆ. ಆದರೆ ಲೀಜ್ ಪಡೆದ ಗಣಿ ಮಾಲೀಕರು ಬೇಕಾಬಿಟ್ಟಿಯಾಗಿ ಕಲ್ಲಿನ ವಹಿವಾಟು ನಡೆಸುತ್ತಿದ್ದರೂ ಕಂದಾಯ ಇಲಾಖೆ ಮಾತ್ರ ಯಾವುದೇ ಗಮನ ಹರಿಸುತ್ತಿಲ್ಲ.