ಅಕ್ರಮ ಮಣ್ಣು ಮಾರಾಟದ ಆರೋಪ ಸುಳ್ಳು
Jun 26 2024, 12:31 AM ISTಕನ್ನಡಪ್ರಭ ವಾರ್ತೆ ಕಾಗವಾಡ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜಲ ಜೀವನ ಮೀಷನ್ ಕಾಮಗಾರಿಯಲ್ಲಿನ ಮಣ್ಣಿಗೆ ಕನ್ನ ಹಾಕಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಜುಗೂಳ ಗ್ರಾಪಂ ಅಧ್ಯಕ್ಷ ಕಾಕಾ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.ಜುಗೂಳ ಗ್ರಾಮ ಪಂಚಾಯತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಕ್ಕೆ ಜಲ ಜೀವನ ಮೀಷನ್ ಯೋಜನೆಯಡಿಯಲ್ಲಿ ಓವ್ಹರ್ ಹೆಡ್ ಟ್ಯಾಂಕ್ ಕಟ್ಟಬೇಕಾಗಿತ್ತು. ಆದರೆ, ಅದನ್ನು ನಿರ್ಮಿಸಲು ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಗ್ರಾಮದ ಸಂದೇಶ ಕುಮಠಳ್ಳಿಯವರ ಜಮೀನಿನಲ್ಲಿ ಬಾಡಿಗೆ (ಲಿಜ್) ಮೂಲಕ ಪಡೆದು ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ.