ಉಡುಪಿ: ವೈಭವದ ರಾಘವೇಂದ್ರ ಆರಾಧನೆ ಸಂಪನ್ನ
Aug 23 2024, 01:03 AM ISTಮಧ್ಯಾಹ್ನದ ಮಹಾಪೂಜೆ ಹಾಗೂ ಪಲ್ಲ ಪೂಜೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಗಳು ನೆರವೇರಿಸಿದರು. ಸಂಜೆ ಶ್ರೀ ಕೃಷ್ಣನ ಸುವರ್ಣ ರಥದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವ ಅವತಾರ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ರಥೋತ್ಸವ ನಡೆಸಿ ಶ್ರೀ ಕೃಷ್ಣನ ಸನ್ನಿಧಿಯ ಮುಂಭಾಗದ ಚಂದ್ರ ಶಾಲೆಯಲ್ಲಿ ವೈಭವದ ಪೂಜೆಗಳನ್ನು ನಡೆಸಲಾಯಿತು.