ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿಯೇ ನನ್ನ ಆದ್ಯತೆ: ಪದ್ಮರಾಜ್ ಪೂಜಾರಿ
Apr 23 2024, 12:59 AM ISTನಾನು ಬಿಲ್ಲವ ಸಮಾಜದಲ್ಲಿ ಹುಟ್ಟಿದ್ದು ಹೌದು. ಆ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಂತ ನಾನೆಲ್ಲೂ ಜಾತಿ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿಲ್ಲ. ನಾನು ಸ್ಥಾಪನೆ ಮಾಡಿದ ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಆ ಜಾತಿ, ಈ ಜಾತಿ ಎಂದು ನೋಡದೆ ಸಮಾಜದ ಎಲ್ಲ ಅಶಕ್ತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದೇನೆ ಎಂದು ದ.ಕ. ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.