ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಎಬ್ಬಿಸಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ, ಆದರೆ ಉಪಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು.
ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್, ವರದರಾಜಸ್ವಾಮಿ ದೇವಸ್ಥಾನ, ಸ್ವಿಪರ್ಸ್ ಕಾಲೋನಿ, ಹನುಮಂತ ನಗರ ಸೇರಿದಂತೆ ಇನ್ನಿತರೆ ವಾರ್ಡ್ ಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.