ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಕೀಳರಿಮೆ ಬೇಡ: ಶಾಂತಗೌಡ ಪಾಟೀಲ್
May 13 2024, 12:03 AM ISTಯಾದಗಿರಿ ಜಿಲ್ಲೆಯ ಫಲಿತಾಂಶ ಈ ಬಾರಿ ಪರಿಶುದ್ಧವಾದುದ್ದು. ಶಿಕ್ಷಕರ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಹಿಂದುಳಿದೆ. ಆದರೂ, ಆಳವಾಗಿ ಫಲಿತಾಂಶದ ಅಂಕಿಅಂಶಗಳತ್ತ ಗಮನ ಹರಿಸುವುದಾದರೆ, ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿಡಿದ ಕನ್ನಡಿಯಂತಿದೆ. ಕ್ವಾಂಟಿಟಿ ಕಡಮೆ ಇರಬಹುದು, ಆದರೆ ಕ್ವಾಲಿಟಿ ಹೆಚ್ಚಾಗಿದೆ ಎಂದು ‘ಕನ್ನಡಪ್ರಭ’ ಫೋನ್ ಇನ್ ನೇರ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್ ಹೇಳಿದರು.