ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದ ಶಿವರಾಮು
Dec 01 2024, 01:32 AM ISTಕನ್ನಡ ಭಾಷೆ ಅಕ್ಷರ ಮಾತ್ರವಲ್ಲ, ಕನ್ನಡಿಗರ ನರನಾಡಿಗಳಲ್ಲಿ ಇರುವ ಭಾಷೆ ಕನ್ನಡ ಎಂದು ನಾಗಶ್ರೀ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಸ್ ಶಿವರಾಮು ಹೇಳಿದರು. ಟೈಮ್ಸ್ ಪಿಯು ಕಾಲೇಜು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಂಪ್ರದಾಯಕ ದಿನ, ಪ್ರಯೋಗ ಶಾಲೆ ಹಾಗೂ, ಸವಿರುಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಕನ್ನಡ ಭಾಷೆಯನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು. ಪದವಿಪೂರ್ವ ಕಾಲೇಜು ಹಂತ ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಘಟ್ಟವಾಗಿದೆ ಎಂದರು.