ಮೈಲ್ಸ್ಟೋನ್ ಶಾಲೆಯಿಂದ ಕನ್ನಡ ರಾಜ್ಯೋತ್ಸವ
Nov 26 2024, 12:49 AM ISTಕೆ.ಎನ್.ಎ. ಮೈಲ್ಸ್ಟೋನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕನ್ನಡ ಧ್ವಜ ಬಣ್ಣದ ಸಮವಸ್ತ್ರ ಹಾಗೂ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಯಕ್ಷಗಾನ, ಹುಲಿ ವೇಷ ಕುಣಿತ, ಪೂಜಾ ಕುಣಿತದ ವೇಷ ತೊಟ್ಟು ಪ್ರಮುಖ ವೃತ್ತಗಳಲ್ಲಿ ಡಿಜೆ ಸೌಂಡಿನ ಕನ್ನಡದ ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ಪ್ರಮುಖ ವೃತ್ತ ಹಾಗೂ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಾಗಿ ಗಮನ ಸೆಳೆದರು. ದಾರಿ ಉದ್ದಕ್ಕೂ ಭಾರತ್ ಮಾತಾಕಿ ಜೈ, ಕನ್ನಡಾಂಭೆಗೆ ಜೈ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವ ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು.