ಭೈರಪ್ಪನವರು ಕನ್ನಡ ಸಾಹಿತ್ಯದ ಹೆಮ್ಮರ

Sep 25 2025, 01:00 AM IST
೨೦೧೩ರಲ್ಲಿ ಮೈಸೂರಿನ ಅವರ ನಿವಾಸಕ್ಕೆ ನಾನು ಭೇಟಿ ನೀಡಿದಾಗ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಮ್ಮೊಂದಿಗೆ ಮಾತನಾಡಿ ಚನ್ನರಾಯಪಟ್ಟಣದ ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಮಾತನಾಡಿದ್ದು ನನ್ನ ವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಹಾಗೆ ಪ್ರಥಮ ಬಾರಿಗೆ ನಮ್ಮ ಶಾಲೆಯ ಜ್ಞಾನಸಾಗರ ಪರಂಪರ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರನ್ನು ಕಾರಿನಿಂದ ವೇದಿಕೆಗೆ ಕರೆದೊಯ್ಯುವಾಗ ಅವರ ನೂರಾರು ಅಭಿಮಾನಿಗಳು, ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕಂಡಾಗ ಭೈರಪ್ಪನವರ ವ್ಯಕ್ತಿತ್ವದ ಪರಿಚಯ ಮನದಟ್ಟಾಗುವಂತಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚುಜನ ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದು ಸ್ಮರಣೀಯ ಎಂದರು.