ಕನ್ನಡ ತಳಮಟ್ಟದ ಶ್ರಮಿಕರಿಂದ ಕಟ್ಟಲ್ಪಟ್ಟ ನೆಲ
Nov 16 2024, 12:36 AM ISTತಳಮಟ್ಟದ ಶ್ರಮಿಕ ವರ್ಗದವರಿಂದಲೇ ಕಟ್ಟಲ್ಪಟ್ಟಿರುವ ಕನ್ನಡದ ಈ ನೆಲ ಸ್ವಾಭಿಮಾನದ ಸಂಕೇತವಾಗಿದ್ದು, ಶರಣು ಶರಣಾರ್ಥಿಗಳ ನಾಡಾಗಿದೆ. ಜಾಗತೀಕರಣದ ಪ್ರಭಾವದಿಂದ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾಗಿದ್ದು, ಕನ್ನಡಿಗರು ಹೊಣೆಗಾರಿಕೆ ಅರಿತು ಕನ್ನಡತನವನ್ನು ಮೆರೆಯಬೇಕಾಗಿದೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.