ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲು ಒಂದೂವರೆ ವರ್ಷದಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಸಹಾಯಧನ ಸ್ಥಗಿತ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬಡವರ ಮನೆಗಳ ಸಾಲದ ಮೇಲಿನ ಬಡ್ಡಿ ಕಡಿತ, ಸರ್ಕಾರದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಡವರ ಮನೆಗಳ ನಿರ್ಮಾಣ, ಬೆಂಗಳೂರಿನಲ್ಲಿ ಕೆಎಚ್‌ಬಿಯ ಸೂರ್ಯ ನಗರ 4 ಹಂತದ ಯೋಜನೆಯಡಿ ನಿವೇಶನಗಳ ಹಂಚಿಕೆ ಸೇರಿದಂತೆ ವಸತಿ ಇಲಾಖೆಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆಗಳನ್ನು ನೀಡಲಾಗಿದೆ.
ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಸಿದ್ದು ಭರ್ಜರಿ ಸಹಕಾರ
- ಕಲಬುರಗಿಯಲ್ಲಿ ಮೆಗಾ ಡೈರಿ, ಕೊಪ್ಪಳದಲ್ಲಿ ಕುರಿ- ಮೇಕೆ ಮಾರುಕಟ್ಟೆ
- ತೊಗರಿಗೆ ₹450 ಪ್ರೋತ್ಸಾಹ ಧನ । ಹೈನುಗಾರಿಕೆಗೆ ₹10 ಕೋಟಿ
- ರಾಜ್ಯದ ಎಪಿಎಂಸಿಗಳಲ್ಲಿ ದುಡಿವ ಶ್ರಮಿಕರಿಗೆ ಇನ್ನು 5 ಲಕ್ಷ ರು. ವಿಮೆ
ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮೂಲಕ ರಾಜ್ಯದ ನ್ಯಾಯಾಲಯಗಳ ಕಾರ್ಯ ಕಲಾಪಗಳ ಪ್ರತಿಲೇಖನ (ಟ್ರಾನ್ಸ್‌ಕ್ರಿಪ್ಷನ್) ಹಾಗೂ ನ್ಯಾಯಾಂಗ ದಾಖಲೆಗಳ ಅನುವಾದಕ್ಕಾಗಿ ‘ಸ್ಮಾರ್ಟ್ ಸಿಸ್ಟಂ’ (Smart System) ಯೋಜನೆ ಜಾರಿಗೆ ತರಲು ಉದ್ದೇಶಿಸಿರುವ ಸರ್ಕಾರ
ಪತ್ರಕರ್ತರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ 5 ಲಕ್ಷ ರು.ವರೆಗೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದೆ.
ಕರ್ನಾಟಕ ಬಜೆಟ್ 2025 : ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಿದೆ
ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿ ಪ್ರವಾಸಿಗರಿಗಾಗಿ 24*7 ಸಹಾಯವಾಣಿ
- ಮೈಸೂರಿನಲ್ಲಿ ಇತಿಹಾಸ, ಸಂಸ್ಕೃತಿ ಬಿಂಬಿಸುವ ರಾಜ್ಯಮಟ್ಟದ ವಸ್ತು ಸಂಗ್ರಹಾಲಯ - ಸವದತ್ತಿಯ ಯಲ್ಲಮ್ಮ ದೇಗುಲ, ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗ ₹199 ಕೋಟಿ
ಅಬಕಾರಿ ಖಾಲಿ ಇರುವ ಪದ್ಯ ಪರವಾನಗಿ ಇ-ಹರಾಜು
- ಅಬಕಾರಿಯಿಂದ ₹40000 ಕೋಟಿ ಆದಾಯ ಟಾರ್ಗೆಟ್ - ಪ್ರೀಮಿಯಂ ಮದ್ಯದ ದರ ಈ ವರ್ಷವೂ ಪರಿಷ್ಕರಣೆ
ಕರ್ನಾಟಕ ಬಜೆಟ್ನಲ್ಲಿ ಈ ಬಾರಿ ಮುಖ್ಯಮಂತ್ರಿ ಸಿದದರಾಮಯ್ಯ ಮಹಿಳೆಯರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ನೀಡಿದ ಕೊಡುಗೆಗಳೇನು ?