ಕರ್ನಾಟಕ ಏಕೀಕರಣದಲ್ಲಿ ಹಿರಿಯರ ಹೋರಾಟ, ತ್ಯಾಗವಿದೆ
Nov 28 2023, 12:30 AM IST ಹರಿದು ಹಂಚಿಹೋಗಿದ್ದ ಕರ್ನಾಟಕದ ಭಾಗಗಳನ್ನು ಒಗ್ಗೂಡಿಸುವಲ್ಲಿ ಅನೇಕ ಹಿರಿಯರ ಹೋರಾಟ ತ್ಯಾಗ ಬಲಿದಾನವಿದೆ. ರಾಷ್ಟ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಇಲ್ಲಿನ ಜಲ, ಅರಣ್ಯ, ಖನಿಜ ಸೇರಿ ಅಖಂಡ ಭಾರತದ ಅಭಿವೃದ್ಧಿಯಲ್ಲಿ ಕನ್ನಡಿಗರದು ಪಾಲಿದೆ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಕೋಟೆ ವಾಯುವಿಹಾರಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಕೋಟೆ ಮುಂಭಾಗದ ಲ್ಲಿರುವ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.,