30ರಂದು ಕರ್ನಾಟಕ ವಿವಿ 73ನೇ ಘಟಿಕೋತ್ಸವ
Oct 28 2023, 01:15 AM ISTಕನ್ನಡಪ್ರಭ ವಾರ್ತೆ ಧಾರವಾಡಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಅ. 30 ರಂದು ಬೆಳಗ್ಗೆ 10.30ಕ್ಕೆ ಗಾಂಧಿ ಭವನದಲ್ಲಿ ಜರುಗಲಿದ್ದು, ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳು ಆದ ಥಾವರ್ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾಹಿತಿ ನೀಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಅಡ್ವಾನ್ಸ್ ರಿಸರ್ಚ ನಿರ್ದೇಶಕ ಪ್ರೊ. ನಿತಿನ ಶೇಠ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ಭಾಗವಹಿಸಲಿದ್ದಾರೆ ಎಂದರು.