ನಲ್ಲಿಗಳಲ್ಲಿ ಪೂರೈಕೆಯಾಗುತ್ತಿದೆ ಕಲುಷಿತ ನೀರು
May 17 2024, 12:30 AM ISTಕನ್ನಡಪ್ರಭ ವಾರ್ತೆ ಲೋಕಾಪುರ: ಕಳೆದ ಹಲವು ದಿನಗಳಿಂದ ನಲ್ಲಿಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರು ಕುಡಿದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ ಎಂದು ನಾಗರಿಕರು ಭಯಗೊಂಡಿದ್ದಾರೆ. ಪಟ್ಟಣದ ದೇಸಾರ ವಾಡೆ, ಬಯ್ಯಾರ ಓಣಿ, ೧ನೇ ವಾರ್ಡ್ನಲ್ಲಿ ಕಂದು ಬಣ್ಣದ, ದುರ್ನಾತ ಬೀರುತ್ತಿರುವ ನೀರು ಪೂರೈಕೆಯಾಗುತ್ತಿದ್ದು, ಜನರು ಪಪಂನವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.