156 ಚೀಲ, ಹಲವು ಕಪಾಟುಗಳಲ್ಲಿ ತುಂಬಿಟ್ಟಿದ್ದ ಹಣ ವಶ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದನ ಬಳಿ ₹220 ಕೋಟಿ ಕ್ಯಾಶ್‌ ಪತ್ತೆ!

Dec 09 2023, 01:15 AM IST
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಒಡಿಶಾದಲ್ಲಿ ಬೃಹತ್‌ ಕಾರ್‍ಯಾಚರಣೆ. ರಾಜ್ಯಸಭಾ ಸದಸ್ಯ, ಲಿಕ್ಕರ್‌ ಉದ್ಯಮಿ ಧೀರಜ್‌ ಸಾಹು ಸಂಪತ್ತು ಅನಾವರಣ. ಹಣ ಎಣಿಸಲು 30 ಜನ, 8 ಯಂತ್ರ ಬಳಕೆ. ಜಪ್ತಿಯಾದ ಹಣ ₹400 ಕೋಟಿ?. ರಾಜ್ಯಸಭಾ ಸದಸ್ಯ ಧೀರಜ್‌ ಸಾಹುಗೆ ಸೇರಿದ ಒಡಿಶಾದ ವಿವಿಧೆಡೆ ತೆರಿಗೆ ದಾಳಿ. ಬುಧವಾರ ಆರಂಭವಾದ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಕೆ. ಈವರೆಗೆ 220 ಕೋಟಿ ರು. ನಗದು ಪತ್ತೆ. ಇನ್ನೂ ನಡೆಯುತ್ತಿದೆ ಎಣಿಕೆ ಕಾರ್ಯ. ಧೀರಜ್‌ ಬಳಿ ಪತ್ತೆಯಾದ ಹಣದ ಮೌಲ್ಯ 400 ಕೋಟಿ ರು. ಇರುವ ಅಂದಾಜು. ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದು. ಬಲ್ಡಿಯಾ ಸಾಹು ಎಂಬ ಮದ್ಯ ತಯಾರಿಕೆ ಹಾಗೂ ಮಾರಾಟ ಸಂಸ್ಥೆಯ ಮೇಲೂ ದಾಳಿ. ಇದು ಒಡಿಶಾದ ಅತಿದೊಡ್ಡ ಮದ್ಯ ತಯಾರಿಕೆ, ಮಾರಾಟ ಕಂಪನಿ. ಸಾಹು ಒಡೆತನದ್ದು.

ಕಾಂಗ್ರೆಸ್‌ ಕಾರ್ಯಕರ್ತರು ಪುಢಾರಿಗಳೆಂಬ ಹೇಳಿಕೆ ಸಲ್ಲದು

Dec 05 2023, 01:30 AM IST
ಕೆಎಚ್‌ಬಿ ಬಡಾವಣೆಯಲ್ಲಿ ಅಪೂರ್ಣವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತರಾತುರಿಯಲ್ಲಿ ಉದ್ಘಾಟಿಸಿದರು. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಅಸ್ಥಿತ್ವದ ನಂತರವೂ ಸಂಪೂರ್ಣಗೊಂಡ ಆಸ್ಪತ್ರೆಯನ್ನು ಪುನಃ ಹೋಮ ಹವನದ ಮೂಲಕ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಉಸ್ತುವಾರಿ ಸಚಿವರ ಗಮನಕ್ಕೆ ತಾರದೇ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸತತ 4 ದಶಕ ಶಾಸಕ, ಡಿಸಿಎಂ, ಸಿಎಂ ಆಗಿ ಎಲ್ಲ ಅಧಿಕಾರ ಅನುಭವಿಸಿದ ಯಡಿಯೂರಪ್ಪ ಅವರು ತಾಲೂಕಿನ ನಿವೇಶನರಹಿತ ಬಡವರಿಗೆ ಉಚಿತ ನಿವೇಶನ ವಿತರಿಸಲಿಲ್ಲ. ಸಾಗುವಳಿದಾರರಿಗೆ ಹಕ್ಕುಪತ್ರ ದೊರಕಿಸಿಲ್ಲ. ಒತ್ತುವರಿದಾರ ಬಗರ್‌ಹುಕುಂ ರೈತರಿಗೆ ₹5 ಸಾವಿರ ದಂಡ, ಒಂದು ವರ್ಷ ಜೈಲು ಶಿಕ್ಷೆಯ ಕಠಿಣ ಕಾನೂನು ಜಾರಿಗೊಳಿಸಿದ ಕೀರ್ತಿ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸೋಲಿಗೆ ಗುಂಪುಗಾರಿಕೆ ಕಾರಣ: ಕೆ.ಎನ್. ರಾಜಣ್ಣ

Dec 04 2023, 01:30 AM IST
ಪಂಚ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದಲ್ಲಿರುವ ಗುಂಪುಗಾರಿಕೆ ಕಾರಣ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.ಪಂಚರಾಜ್ಯ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ಒಗ್ಗಟ್ಟಾದರೂ ಬಿರುಕು ಮುಚ್ಚುವ ಕೆಲಸ ಆಗಲಿಲ್ಲ. ಆ ದೃಷ್ಟಿಯಿಂದ ಆ ಒಂದು ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಸೋಲಲಿಕ್ಕೆ ಕಾರಣ ಆಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.ಮಧ್ಯಪ್ರದೇಶ, ರಾಜಸ್ತಾನ, ಛತ್ತಿಸ್‌ಘಡದಲ್ಲಿ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದು, ಈ ಫಲಿತಾಂಶ ಸ್ಥಳೀಯ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದರು.