ಕುಟುಂಬ ಸೇರಿದ ಬಿಹಾರ ಮೂಲದ ಮಹಿಳೆ: ಕುಟುಂಬಸ್ಥರ ಸಂತೋಷ
Jan 26 2025, 01:33 AM ISTಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಅಸಹಾಯಕರಾಗಿ ತಿರುಗಾಡುತ್ತಿದ್ದ ಈ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದರು. ಆಕೆ ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ ಯೋಗ - ಧ್ಯಾನ, ಕೃಷಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಆಪ್ತ ಸಮಾಲೋಚನೆಗೆ ಸ್ಪಂದಿಸಿ, ತನ್ನ ಹೆಸರು ರಮಾದೇವಿ ಎಂದೂ, ತನ್ನ ಕುಟುಂಬದ ವಿಳಾಸ ವಿವರಗಳನ್ನು ನೀಡಿದ್ದರು.