ಕೇಂದ್ರ ಸರ್ಕಾರದಿಂದ ಕಾಟಾಚಾರ ಬಜೆಟ್‌: ಸುಂದರೇಶ್

Feb 05 2024, 01:49 AM IST
ಕೇಂದ್ರ ಸರ್ಕಾರದ ಬಜೆಟ್‌ ಕಾಟಾಚಾರ ಬಜೆಟ್‌ ಆಗಿದೆ. ಕೆಲವು ಉದ್ಯಮಿಗಳಿಗೆ ಗುತ್ತಿಗೆ ನೀಡಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಇದು ಅತ್ಯಂತ ಕಳಪೆ ಬಜೆಟ್. ಕಳೆದ ಬಜೆಟ್‌ನಲ್ಲಿ ಕೊರೋನಾದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ₹20 ಸಾವಿರ ಕೋಟಿಯನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಆದರೆ, ಜಿಲ್ಲೆಯ ಯಾವ ಕೈಗಾರಿಕೆಗೂ ಇದರಿಂದ ಪ್ರಯೋಜನ ಆಗಲಿಲ್ಲ. 2022 ಗುಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಈವರೆಗೂ ಜಿಲ್ಲೆಯಲ್ಲಿ ಒಂದು ಮನೆಯೂ ನಿರ್ಮಾಣ ಆಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್‌. ಸುಂದರೇಶ್ ಶಿವಮೊಗ್ಗದಲ್ಲಿ ಆರೋಪಿಸಿದ್ದಾರೆ.