ಮಹದಾಯಿಗೆ ಮತ್ತೆ ಅಡ್ಡಗಾಲು ಹಾಕುತ್ತಾ ಗೋವಾ?
Jul 06 2024, 12:52 AM ISTಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಗೋವಾ ಸರ್ಕಾರದ ಒತ್ತಡದ ಮೇರೆಗೆ ಕೇಂದ್ರ ಪ್ರವಾಹ (ನೀರು ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ) ಸಂಸ್ಥೆಯ ನಿಯೋಗ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿನ ಮಹದಾಯಿ ನದಿ ಜಲಾನಯನ ಪ್ರದೇಶ ಪರಿಶೀಲನೆಗೆ ಮುಂದಾಗಿದೆ. ಈಗಾಗಲೇ ಗೋವಾದಲ್ಲಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುವ ಈ ನಿಯೋಗ ಜು.7 ರಂದು ಕಳಸಾ- ಬಂಡೂರಿ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಲಿದೆ.