ವಿಧಾನ ಪರಿಷತ್ ಚುನಾವಣೆ: ಇಂದು ಮತದಾನ
Jun 03 2024, 12:30 AM ISTಮತದಾನ ಹಿನ್ನೆಲೆ ಭಾನುವಾರ ಚುನಾವಣಾ ಸಿಬ್ಬಂದಿಗಳಿಗೆ ಮತದಾನ ಪ್ರಕ್ರಿಯೆ ಕುರಿತು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಾಹಿತಿ ನೀಡಿ ಬಳಿಕ ಮತದಾನ ಸಲಕರಣೆಗಳ ನೀಡಲಾಯಿತು. ಸಲಕರಣೆ ಪಡೆದ ಸಿಬ್ಬಂದಿಗಳು ಮತಗಟ್ಟೆಗಳತ್ತ ಹೊರಟರು. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಒಟ್ಟು 27,412 ಮಂದಿ 38 ಮತಕೇಂದ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 4,365 ಮತದಾರರಿದ್ದು ಒಟ್ಟು 32 ಮತಕೇಂದ್ರಗಳ ತೆರೆಯಲಾಗಿದೆ.